ಪೂಜ್ಯರೇ ಯಾವುದನ್ನು ಪಡೆಯಬೇಕು ? >ಗುರು ಹಿರಿಯರ ಮಾತನ್ನು ಮಾರ್ಗದರ್ಶನವನ್ನು ಪಡೆಯಬೇಕು . ಹಿತಕರವಾದದ್ದು ಯಾವುದು ? >ಧರ್ಮವು (ಕರ್ತವ್ಯವು ) ಹಿತಕರವಾದದ್ದು. ವಿಷವು ಯಾವುದು ? >ಗುರು-ಹಿರಿಯರಿಗೆ ಮಾಡಿದ ಅವಮಾನ,ಅಗೌರವವೇ ವಿಷವು ಮನುಷ್ಯನಲ್ಲಿ ಹೆಚ್ಚಾಗಿ ಅಪೇಕ್ಷಿಸುವುದು ಯಾವುದು ? >ತನ್ನ ಮತ್ತು ಇತರರ ಒಳ್ಳೆಯದರಲ್ಲಿ ತೊಡಗಿಸಿದ ಜೀವನವು ಮಾನವನಲ್ಲಿ ಹೆಚ್ಚು ಅಪೇಕ್ಷಿತ . ಮತ್ತೆ ಕಳ್ಳರು ಯಾರು ? >ಸುಖಪಭೋಗ ವಸ್ತುಗಳೇ ಕಳ್ಳರು (ಅವು ಇಂದ್ರಿಯಗಳ ಮೂಲಕ ಮನಸನ್ನು ಅಪಹರಿಸುತ್ತವೆ) ವ್ಯೆರಿಯು ಯಾರು ? >ನಿರುದ್ಯೋಗವೇ (ಕೆಲಸವಿಲ್ಲದಿರುವುದೇ) ವ್ಯೆರಿಯು ….